ದೇವರ ವಾಕ್ಯದಲ್ಲಿ ಸ್ಫೂರ್ತಿ ಪಡೆಯಿರಿ
ಗ್ರಂಥಕರ್ತೃತ್ವ ಅಪೊಸ್ತಲನಾದ ಯೋಹಾನನು ಇದರ ಗ್ರಂಥಕರ್ತನಾಗಿದ್ದೇನೆ. ಅವನು 2 ಯೋಹಾನ 1:1 ರಲ್ಲಿ ತನ್ನನ್ನು ಹಿರಿಯನು ಎಂದು ವಿವರಿಸುತ್ತಾನೆ. ಪತ್ರಿಕೆಯ ಶೀರ್ಷಿಕೆಯು 2 ಯೋಹಾನ. ಅಪೊಸ್ತಲನಾದ ಯೋಹಾನನ ಹೆಸರನ್ನು ಹೊಂದಿರುವ 3 ಸರಣಿ ಪತ್ರಿಕೆಗಳಲ್ಲಿ ಇದು ಎರಡನೆಯದಾಗಿದೆ. ಸುಳ್ಳು ಬೋಧಕರು ಯೋಹಾನನ ಸಭೆಗಳಲ್ಲಿ ಸಂಚಾರಿ ಸೇವೆಯನ್ನು ಮಾಡುತ್ತಿದ್ದರು, ಮತಾಂತರಿಸಲು ಪ್ರಯತ್ನಿಸುತ್ತಿದ್ದರು ಮತ್ತು ತಮ್ಮ ಪ್ರಚಾರಕಾರ್ಯವನ್ನು ಹೆಚ್ಚಿಸಿಕೊಳ್ಳಲು ಕ್ರೈಸ್ತೀಯ ಆತಿಥ್ಯದ ಪ್ರಯೋಜನ ಪಡೆಯುತ್ತಿದ್ದರು ಎಂಬುದರ ಬಗ್ಗೆ 2 ಯೋಹಾನ ಪತ್ರಿಕೆಯು ಕೇಂದ್ರೀಕರಿಸುತ್ತದೆ. ಬರೆದ ದಿನಾಂಕ ಮತ್ತು ಸ್ಥಳ ಸರಿಸುಮಾರು ಕ್ರಿ.ಶ. 85-95 ರ ನಡುವೆ ಬರೆಯಲ್ಪಟ್ಟಿದೆ. ಬಹುಶಃ ಬರೆದ ಸ್ಥಳವು ಎಫೆಸ ಆಗಿರಬಹುದು. ಸ್ವೀಕೃತದಾರರು ಎರಡನೆಯ ಯೋಹಾನನ ಪತ್ರಿಕೆಯು ಪ್ರಿಯ ಅಮ್ಮನವರಿಗೂ ಮತ್ತು ಆಕೆಯ ಮಕ್ಕಳಿಗೂ ಎಂದು ಗುರುತಿಸಲ್ಪಡುವ ಒಂದು ಸಭೆಗೆ ಬರೆದ ಪತ್ರಿಕೆಯಾಗಿದೆ. ಉದ್ದೇಶ ಈ “ಅಮ್ಮನವರ ಮತ್ತು ಆಕೆಯ ಮಕ್ಕಳ” ನಂಬಿಗಸ್ತಿಕೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಲು ಮತ್ತು ಪ್ರೀತಿಯಲ್ಲಿ ನಡೆಯುವಂತೆ ಹಾಗೂ ಕರ್ತನ ಆಜ್ಞೆಗಳನ್ನು ಕೈಕೊಂಡು ನಡೆಯುವಂತೆ ಪ್ರೋತ್ಸಾಹಿಸಲು ಯೋಹಾನನು ತನ್ನ ಎರಡನೆಯ ಪತ್ರಿಕೆಯನ್ನು ಬರೆದನು. ಅವನು ಸುಳ್ಳು ಬೋಧಕರ ಬಗ್ಗೆ ಆಕೆಯನ್ನು ಎಚ್ಚರಿಸಿದನು ಮತ್ತು ಅವನು ಶೀಘ್ರದಲ್ಲೇ ಭೇಟಿ ಮಾಡಲು ಯೋಜಿಸುತ್ತಿದ್ದಾನೆಂದು ಆಕೆಗೆ ತಿಳಿಸಿದ್ದನು. ಯೋಹಾನನು ಆಕೆಯ “ಸಹೋದರಿ” ಯನ್ನು ಸಹ ವಂದಿಸಿದನು. ಮುಖ್ಯಾಂಶ ವಿಶ್ವಾಸಿಗಳ ವಿವೇಚನೆ ಪರಿವಿಡಿ 1. ವಂದನೆಗಳು — 1:1-3 2. ಪ್ರೀತಿಯಲ್ಲಿ ಸತ್ಯವನ್ನು ಕಾಪಾಡಿಕೊಳ್ಳುವುದು — 1:4-11 3. ಎಚ್ಚರಿಕೆಗಳು — 1:5-11 4. ಅಂತಿಮ ವಂದನೆಗಳು — 1:12-13
— 2 ಯೋಹಾ